Tel: 7676775624 | Mail: info@yellowandred.in

Language: EN KAN

    Follow us :


ಬಹುಮುಖ ಪ್ರತಿಭೆಯ ಡಾ.ಎಲ್.ಸಿ. ರಾಜು

Posted date: 27 Jan, 2018

Powered by:     Yellow and Red

ಬಹುಮುಖ ಪ್ರತಿಭೆಯ ಡಾ.ಎಲ್.ಸಿ. ರಾಜು

ಡಾ.ಎಲ್.ಸಿ. ರಾಜು ಅವರು ಬಹುಮುಖ ಪತ್ರಿಭೆಯುಳ್ಳವರು. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಇವರು ದಿನಾಂಕ 24-/04-/1969ರಂದು ಜನಿಸಿದರು. ತಾಯಿ ಕಮಲಮ್ಮ, ತಂದೆ ಲಕ್ಕಪ್ಪ. ಇವರು ತಮ್ಮ ಪ್ರಾಥಮಿಕ ಮತ್ತು ಮಾಧ್ಯಮಿಕ ತರಗತಿಗಳ ವ್ಯಾಸಂಗವನ್ನು ರಾಮನಗರದ ಛತ್ರದ ಬೀದಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿಯೂ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ರಾಮನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿಯೂ ಮತ್ತು ಪದವಿ ತರಗತಿಗಳ ವ್ಯಾಸಂಗವನ್ನು ರಾಮನಗರದ ಪುರಸಭಾ ಪ್ರಥಮ ದರ್ಜೆ ಕಾಲೇಜಿನಲ್ಲಿಯೂ ಪೂರೈಸಿದ್ದಾರೆ.

ಇವರು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಯ ಕನ್ನಡ ಅಧ್ಯಯನ ಕೇಂದ್ರದ ಮೂಲಕ ಕನ್ನಡ ಎಂ.ಎ. ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದಿದ್ದಾರೆ. ಜೊತೆಗೆ, ‘ಡಾ.ಜಿ.ಪಿ.ರಾಜರತ್ನಂ ಅವರ ಸಾಹಿತ್ಯದಲ್ಲಿ ವೈಚಾರಿಕ ಪ್ರಜ್ಞೆಯ ನೆಲೆಗಳು’ ಎಂಬ ವಿಷಯವಾಗಿ ನಾಡಿನ ಸುಪ್ರಸಿದ್ಧ ಕವಿ ಡಾ.ಸಿದ್ಧಲಿಂಗಯ್ಯ ಅವರ ಮಾರ್ಗದರ್ಶನದಲ್ಲಿ ಅಧ್ಯಯನ ನಡೆಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ.

ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿರುವ ಇವರು ಕೃಷ್ಣರಾಜಪೇಟೆ, ರಾಮನಗರ, ಪಾವಗಡ ಮತ್ತು ನಾಗಮಂಗಲ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಬೆಂಗಳೂರಿನ ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಲ್ಲಿ ಬರಹಗಾರರಾಗಿರುವ ಇವರು ಕಥೆ, ಕವಿತೆ ಮತ್ತು ನಾಟಕಗಳ ರಚನೆಯಲ್ಲಿ ಗಮನಾರ್ಹ ಕೆಲಸ ಮಾಡಿದ್ದಾರೆ. ಅತ್ಯುತ್ತಮ ನಟರೂ ಆಗಿರುವ ಇವರು ಹಲವಾರು ನಾಟಕಗಳಲ್ಲಿ ನಾಯಕ ಪಾತ್ರಗಳಲ್ಲಿ ಅಭಿನಯಿಸಿ, ಪ್ರೇಕ್ಷಕರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಅಧ್ಯಾಪಕ ವೃತ್ತಿಗೆ ಬಂದ ನಂತರದಲ್ಲಿ ನಟನೆಯಿಂದ ದೂರ ಉಳಿದು ಅಧ್ಯಾಪನ ಮತ್ತು ಸಾಹಿತ್ಯ ರಚನಾ ಕಾರ್ಯದಲ್ಲಿ ಕ್ರಿಯಾಶೀಲರಾಗಿ ತೊಡಗಿಕೊಂಡಿದ್ದಾರೆ. 

ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಹಲವಾರು ಸಂಘ-ಸಂಸ್ಥೆಗಳು ಇವರನ್ನು ಅಭಿನಂದಿಸಿ ಗೌರವಿಸಿವೆ. ಡಾ.ಸುಭಾಷ್ ಭರಣಿ ಯುವ ಬಳಗವು ಇವರಿಗೆ ‘ಸಾಹಿತ್ಯ ರತ್ನ’ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ರಾಮನಗರ ಜಿಲ್ಲಾಡಳಿತವು ದಿನಾಂಕ 14/-11/-2011ರಂದು ನಡೆಸಿದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿಯೂ, ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ದಿನಾಂಕ 19-/11/-2011ರಂದು ಹಮ್ಮಿಕೊಂಡಿದ್ದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿಯೂ, ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರವು ದಿನಾಂಕ 12-/01-/2012ರಂದು ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಸಮಾರಂಭದಲ್ಲಿಯೂ ಮತ್ತು ರಾಮನಗರದ ಸಂಸ್ಕೃತಿ ಸೌರಭ ಟ್ರಸ್ಟ್ ವತಿಯಿಂದ ದಿನಾಂಕ: 23-/03/-2012ರಂದು ಏರ್ಪಡಿಸಲಾಗಿದ್ದ ಯುಗಾದಿ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿಯೂ ಸಾಹಿತ್ಯ ಕ್ಷೇತ್ರಕ್ಕೆ ಇವರು ಸಲ್ಲಿಸುತ್ತಿರುವ ಸೇವೆಗಾಗಿ ಇವರನ್ನು ಸನ್ಮಾನಿಸಿ ಗೌರವಿಸಲಾಗಿದೆ.

ಇವರ ಪ್ರಕಟಿತ ಸಾಹಿತ್ಯ:  ಕಪ್ಪು ಬಾನ ಬೆಳ್ಳಿ ಚುಕ್ಕಿ, ಚಿಲ್ಲರೆಗಳು ಸದ್ದು ಮಾಡುತ್ತವೆ, ಬೆವರಿನ ದನಿಗಳು, ಮೃಗಾವತಾರಿ (ಕವನ ಸಂಕಲನಗಳು), ಕನಸಿನ ರಾಶಿ (ಜಿ.ಶಿವಣ್ಣ ಕೊತ್ತೀಪುರ ಅವರ ಕವಿತೆಗಳ ಜೊತೆಗಿನ ಕಾವ್ಯ ಸಂಕಲನ), ಕಥೆಗಾರ, ಅಜ್ಜ ನೆಟ್ಟ ಆಲದ ಮರ (ಆಕಾಶವಾಣಿ ಪ್ರಸಾರಿತ ನಾಟಕಗಳು), ಕೊರಳು ಕೊಯ್ದವರು, ಪ್ಯಾಟೆ ಪುರಾಣ, ನ್ಯಾಯಕ್ಕೇ ನೇಣು, ಉದುರ್ಯಾವೆ ಕನಸು ಉಡಿ ತುಂಬ, ಬರಡಾದ ಬದುಕು (ನಾಟಕಗಳು), ನುಡಿದೀಪ, ಮೊದಲುಳುಮೆ (ಲೇಖನ ಸಂಕಲನಗಳು), ಹರಿವ ಹೊಳೆ, ಕಾವ್ಯ ಕಾರಂಜಿ (ಸಂಪಾದಿತ ಕೃತಿಗಳು), ಸೇವಾಭಿನಂದನ (ಹಿರಿಯ ವೈದ್ಯರಾದ ಡಾ.ಎಸ್.ಎಲ್.ತಿಮ್ಮಯ್ಯ ಅವರ ಅಭಿನಂದನಾ ಗ್ರಂಥದ ಸಂಪಾದಕ ಮಂಡಳಿ ಸದಸ್ಯ), ಕಟ್ಟುಗಳ ಕಳಚುತ್ತ (ಬೇಲೂರು ರಘುನಂದನ್ ಅವರ ಕಟ್ಟುಪದಗಳನ್ನು ಕುರಿತ ವಿಮರ್ಶಾ ಲೇಖನಗಳ ಸಂಕಲನದ ಸಂಪಾದಕ).

ರಾಮನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜನವರಿ 31ರಂದು ಕೂಟಗಲ್‌ ಹೋಬಳಿಯ ಶಾನುಭೋಗನಹಳ್ಳಿಯಲ್ಲಿ ನಡೆಯುವ ಆರನೆಯ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಬರಹ–ನೀರು

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ

ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.


<

ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ

\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ

ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ

ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು

ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.

ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ

ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ

ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ

ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ

ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ

ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ

ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ

ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ

ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್

ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ  ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ

ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ

ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ

Top Stories »  


Top ↑